ಭಾನುವಾರ, ಜುಲೈ 22, 2012

ಕೂಸಳ್ಳಿ Falls-ಪ್ರಕೃತಿ ಮಡಿಲಲ್ಲಿ

       ಗಂಡು ಮಕ್ಳಿಗೆ ಆಗಾಗ love failure ಆಗೋದು ಸಾಮಾನ್ಯ. ಮಾತುಕಥೆ ಆಗ್ಲಿಲ್ಲಾಂದ್ರೂ ಮನಸಲ್ಲೇ ಸಾವಿರ ಅಂದ್ಕೊಂಡು ಕೊರಗ್ತಾವೆ ಅಂತ ಹೇಳಿದ್ರೆ ಯಾವುದೇ ಪ್ರಮೇಯದ ಮುಖಾಂತರ ತಪ್ಪೆಂದು ವಾದಿಸೋಕೆ ಸತ್ಯ ಸಾಕ್ಷಿ ಇಲ್ಲ.

ಕೊರಗಿ ಕೊರಗಿ ಹೃದಯಾನ ಹಿಂಡಿ ಹಿಪ್ಪೆ ಮಾಡಿ, ಮನಸ್ಸನ್ ಮುದಡ್ಸ್ಕೊಂಡು, ಮೂತೀನ ಸೊರಗಿಸ್ಕೊಂಡು, ಭ್ರಾಂತಿನ ಮೂಡಿಸ್ಕೊಂಡು, ಜೀವನದ ರಸಕ್ಷಣಗಳನ್ನು ಬಂಜರಾಗಿಸಿಕೊಂಡಿದ್ದ ನಾನು ಅವಳ ನೆನಪುಗಳಿಂದ ಸ್ವಲ್ಪ ದೂರ ಸರಿಯೋಣ ಅಂತ ಪ್ರಕೃತಿ ತಾಣಕ್ಕೆ ಹೋಗಿದ್ದೆ.



         ಕುಂದಾಪುರ ತಾಲ್ಲೂಕಿನ ಬೈಂದೂರಿನ ಹತ್ತಿರ, ಪಶ್ಚಿಮ ಘಟ್ಟದ ಕಾಡುಪ್ರದೇಶದ ಮಧ್ಯೆ ಒಂದು ಜಲಪಾತ ಇದೆ. ಕೂಸಳ್ಳಿ falls ಅಂತ ಅದ್ರ ಹೆಸ್ರು. ಕಾಡ ಹಾದಿಯಲ್ಲಿ ಹೋಗ್ತಾ ಇದ್ರೆ ಹಿಂದೆಂದೂ ಇಲ್ಲಿಗೆ ಜನಾನೇ ಬಂದಿಲ್ಲ ಅನ್ನೋಷ್ಟು ದಟ್ಟವಾಗಿಲ್ಲ. ನಮ್ಮಂಥ ಹುಡುಗ್ರು ಜೊತೆಗಿದ್ರೆ, ಸುಮಾರಿಗ್ ವಯಸ್ಸಾದವ್ರೂ ಬರಬಹುದು. ಕಾಡಿನ ಎತ್ತರ ಏರಿ; ಇಳಿಯನ್ನು ಜಾರಿ, ಜಲಪಾತದ ತಪ್ಪಲಿಗೆ ಸೇರಿದೆ. ಮುಖ ತೊಳೆದು ಅಮೃತದ ಆಸರೆ ಸ್ವೀಕರಿಸಿದವನಿಗೆ ಎಲ್ಲಿಲ್ಲದ ಹರುಷ, ಶಕ್ತಿ. ಹತ್ತಿ ನಡೆದೆ ಶೈಲಜಾಳ(ಶೈಲಜ = ಶೈಲ+ಜ = ನದಿ) ಮೂಲ ಹುಡುಕಿ. ೭ ಹಂತದಲ್ಲಿ ಧುಮುಕೋ ಜಲಪಾತದ ೫ ಹಂತಗಳನ್ನು ಮಾತ್ರ ನಾನು ಕ್ರಮಿಸಿದ್ದು. ೫ ನೇ ಹಂತದಲ್ಲಿ ನೀರಿನ ಧುಮುಕಿನಿಂದ ಬಂಡೆ ಮಧ್ಯ ಉಂಟಾದ ಕೊಳದಲ್ಲಿ ಈಜಿ, ಬಂಡೆ ಮೇಲೆ ಬಂದು, ಸೂರ್ಯನ ಬಿಸಿಲಿಗೆ ಮಯ್ಯೊಡ್ಡಿ ಮಲಗಿದೆ.    ಆಯಾಸ ತಣಿತಿದ್ದಂಗೇ, ಜಲಪಾತದ ಸದ್ದು ಹೆಚ್ಚಾಗತೊಡಗಿತು. ಆ ನೀರಿನ ಸಣ್ಣ ಸಣ್ಣ ಝರಿಯು ನನ್ನ ಮುಖದ ಮೇಲೆ ಕೂತು ಪುಳಕಗೊಳಿಸುತ್ತಿದ್ದವು. ಆವಿಯಾಗುತ್ತಿದ್ದ ನೀರಿನ ಸಿಬಿರಿನ ಮುಖಾಂತರ ಹಾದುಹೊಗೋ ಸೂರ್ಯನ ಕಿರಣಗಳು ನನ್ನ ರೋಮಾಂಚನಗೊಳಿಸುತ್ತಿದ್ದವು. ಹರ್ಷದಿಂದ ಹಿಗ್ಗಿದ ನನ್ನ ಹೃದಯದಲ್ಲಿ ಆ ಕ್ಷಣ ಪರಮಾತ್ಮ ನೆಲೆಸಿದ್ದ; ನನ್ನ ನೋವು, ಲೌಕಿಕ ಒಪ್ಪಂದಗಳನ್ನು ಮರೆಸಿದ್ದ; ಸ್ವರ್ಗ ಸುಖಾನ ಭೂಮಿ ಮೇಲೆ ಆಹ್ವಾನಿಸಿದ್ದ.



     
             ನಾನಲ್ಲಿ ಎಕಾಂಗಿಯಾಗಿರಲಿಲ್ಲ. ನನ್ನೊಂದಿಗೆ ಪ್ರಕೃತಿ ದೇವತೆಯಿದ್ದಳು. ಅವಳ ಮಡಿಲಲ್ಲಿ ನಾ ಮಲಗಿದ್ದೆ. ಆ ಹಸಿರಿನ ನಡುವೆ ನನಗಾಗಲಿಲ್ಲ ಹಸಿವು. ತಾಯಿಯ ಆರೈಕೆ ನನಗಲ್ಲಿ ಪ್ರಾಪ್ತಿಯಾಗಿತ್ತು. ಪಂಚೇಂದ್ರಿಯಗಳು ನಲಿದಾದುತ್ತಿದ್ರೆ, ನನ್ನೆದೆಯ ಪರಮಾತ್ಮ ಹಾಡು ಶುರು ಮಾಡಿದ್ದ.
"ಮರೆತೆ ನಾನು ನಿನ್ನ,
 ಅರಿತೆ ಪ್ರಕೃತಿಯನ್ನ.... "
ಮನಸ್ಸಿಗೆ ಮುದ ಬರ್ತಿದೆ, ದೇಹ ಒಂದು ಹದಕ್ ಬರ್ತಿದೆ.
 
       ಜೀವನದಲ್ಲಿ ನಮ್ಮ ನಿರೀಕ್ಷೆಗೂ ಮೀರಿದ ಸುಖಸಂತೋಷಗಳು ನಮ್ಮನ್ನ ಹುಡುಕ್ಕೊಂಡು ಬರ್ತವೆ. ನಾವು ಸಮಾಧಾನದಿಂದ ಕಾಯ್ಬೇಕಷ್ಟೇ... ಪ್ರೀತಿ ಬರೀ ಹುಡ್ಗೀರ್ ಮೇಲೇ ಆಗಬೇಕಾ? ಇಷ್ಟೊಂದು ಸೌಂದರ್ಯರಾಶಿಗೆ ಒಡತಿಯಾದ ತಾಯಿಯಲ್ಲಿ ಪ್ರೀತಿ, ಆರೈಕೆ ಕಾಣಿಸೋಡಿಲ್ವೆ? ಇಂಥ ಚಿಕ್ಕ ಚಿಕ್ಕ ಪ್ರಶ್ನೆಗಳು ನೀರಿನ ಗುಳ್ಳೆಗಳಂತೆ ನನ್ನ ತಿಳಿ ಮನಸ್ಸಿನ ಮೇಲ್ಮೈಯಲ್ಲಿ ಹುಟ್ಟಿ ಸಾಯುತ್ತಿದ್ದವು. ನಿಷ್ಕಲ್ಮಷ ನೀರಿನ ಝರಿಯ ಚುಂಬನ ನನಗೆ ಮೋಡಿ ಮಾಡಿತ್ತು. ನನ್ನ ಕಣ್ಗಳನ್ನ ಅರಳಿಸಿತ್ತು.



           ನಿಮಗೇನಾದ್ರು ನಿಮ್ಮ ಪಂಚೆಂದ್ರಿಯಾನ ಶುದ್ಧೀಕರಿಸಿಕೊಂಡು, ನಿಮ್ಮೊಳಗಿನ ಪರಮಾತ್ಮನ ಭರತನಾಟ್ಯ ನೋಡೋ ಆಸೆ ಆದ್ರೆ ಕೂಸಳ್ಳಿ falls ಗೆ ಜರೂರ್ ಹೋಗಿ. ೭ ಹಂತಕ್ಕೂ ಮೀರಿ ಮೇಲೇರಿದರೆ, ಅಲ್ಲಿ ಇನ್ನೆರೆಡು ಹಂತದ ಜಲಪಾತ ಇದ್ಯಂತೆ. ಅದರ ಹೆಸ್ರು ಗೂದನಗುಂಡಿ falls ಅಂತೆ. ನಾನು ನೋಡ್ಲಿಲ್ಲ. ಅಲ್ಲಿಗೆ ಬೇರೆ ದಾರಿ ಹಿಡಿದು, ಸೀದ ಜಲಪಾತದ ಮೇಲೆ ಹೋಗಿ ಸೇರಿದ ನನ್ನಣ್ಣ ರಾಕೇಶ್ ಹೇಳಿದ್ದು. ಹ್ಞಾಂ! ನಿಮ್ಮ ಮಾಹಿತಿಗೆ ನಾನು ಸುರಕ್ಷಿತವಾಗಿಯೇ ವಾಪಸ್ ಇಳಿದು, ಮನೆಗೆ ಬಂದು, ಹೊಸ ಜೀವನದ ಶೈಲಿಯನ್ನು ರೂಪಿಸಿಕೊಂಡು ಈ ಲೇಖನಾನ ಬರ್ದಿದೀನಿ.

Photo Owner : ರಾಕೇಶ್  ಹೊಳ್ಳ .










    

7 ಕಾಮೆಂಟ್‌ಗಳು:

  1. ಒಬ್ಬೊಬ್ಬನೇ ಅಥವಾ ಒಂದು ಒಳ್ಳೆ ಕಂಪನಿ ಜೊತೆ ಈ ಥರ ಜಾಗಕ್ಕೆ ಹೋಗ್ಬರೋದ್ರಲಿ ಏನೋ ಒಂಥರಾ ಸುಖ ಇದೆ ..ಮನಸ್ಸು ಸಮಾಧಾನವಾಗತ್ತೆ...and a very gud report on ua trip..

    ಪ್ರತ್ಯುತ್ತರಅಳಿಸಿ
  2. ಭಾವನಾ ಧಾರೆಯಾದ ಈ ನಿಮ್ಮ ಬರವಣಿಗೆಯು ಬಹಳ ಸೊಗಸಾಗಿ ಆ ಸುಂದರ ಜಲಧಾರೆಯಂತೆ ಮೂಡಿ ಬಂದಿದೆ...

    ಪ್ರತ್ಯುತ್ತರಅಳಿಸಿ
  3. ವಿಜ್ಞಾನಿ ಅನಿರುದ್ಹ್ ಅವರೇ..ನಿಮ್ಮ ಬರವಣಿಗೆಯು chennagide..ಅದರ ಜೊತೆಗಿನ ಫೋಟೋಗಳು ಅದರ ಅಂದವನ್ನು ಇಮ್ಮಡಿಗೊಳಿಸಿದೆ.. ಇಬ್ಬರಿಗೂ ಅಭಿನಂದನೆಗಳು...ನಾನು ನೋಡಿದ ಪ್ರಕಾರ ತುಂಬ ಜನ ಬ್ಲಾಗ್ ಬರೆಯಲು ಆರಂಭಿಸುತ್ತಾರೆ ಆದರೆ ಅದನ್ನ ಮುಂದುವರೆಸಿಕೊಂಡು ಹೋಗಲ್ಲ..ನೀವು ಆ ಪೈಕಿಯವರಲ್ಲ ಅಂತ ನಂಬಿರುತ್ತೇನೆ..

    ಪ್ರತ್ಯುತ್ತರಅಳಿಸಿ
  4. ಇಲ್ಲ.. ಆರೀತಿ ಮಾಡಲ್ಲ. ನಿಮ್ಮ ನಮ್ಬಿಕೆಯನ್ನ ಉಳಿಸ್ಕೊತೀನಿ. ನಿಮ್ಮೆಲ್ಲರ ಬೆಂಬಲ ಬೇಕೇ ಬೇಕು... :) Thank you varun bhai :)

    ಪ್ರತ್ಯುತ್ತರಅಳಿಸಿ