ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕುದ್ರೆಮುಖದಲ್ಲಿ ನಡಿಸ್ತಿರೋ ೨೭ನೇ ಕನ್ನಡ ಜನಪ್ರಿಯ ವಿಜ್ಞಾನ ಲೇಖಕರ ತರಬೇತಿ ಶಿಬಿರದಲ್ಲಿ ಭಾಗವಹಿಸೋಕಂತ k.s.r.t.c ಬಸ್ಸು ಹತ್ತಿ ಕೂತು, ಗೆಳೆಯ ಕಿರಣ್ ಗೆ ಫೋನ್ ಮಾಡಿ ಹರಟೆ ಹೊಡಿತಾ ಕೂತ ನನ್ನ ಪಕ್ಕದ ಬಸ್ ಮೇಲೆ "ಸುವರ್ಣ ಕರ್ನಾಟಕ" ಎಂದು ಬರೆದ ಕನ್ನಡದ ಲಿಪಿ ಕಣ್ಣಿಗೆ ಕುಕ್ಕುತ್ತಿತ್ತು. 'ವ' ಮತ್ತು ಅರ್ಕ ವತ್ತಿನ ನಡುವೆ ಇರೋ 'ಣ' ಹಾಗೂ ಅರ್ಕ ವತ್ತು, 'ಕ' ನಡುವಿನ 'ಟ' ಆ ಕುಂಕುಮ ವರ್ಣದಲ್ಲಿ ನನಗೆ ಚಿಟ್ಟೆಗಳಂತೆ ಕಂಗೊಳಿಸಿದರೂ, ಹಾರದೇ ಅಲ್ಲೇ ಕೂತಿದ್ದವು. ಚಿಟ್ಟೆ ಎಷ್ಟೊತ್ತಿಗೆ ಹಾರೋಗುತ್ತೆ ಅಂತ ಹೇಳೋಕಾಗಲ್ಲ! ನನಗೆ ಆ ಘಳಿಗೆಯ ಮೇಲಿದ್ದ ಆತುರ, ಅಗತ್ಯವನ್ನು ಕಿರಣ್ ಗೆ ತಿಳಿಸಿ, ಗಡಿಬಿಡಿಯಲ್ಲಿ ಫೋನ್ ಇಟ್ಟು, ಪೆನ್ನು ಪೇಪರ್ ತೆಗೆದು "ಣ ಹಾಗು ಟ ದಲ್ಲಿನ ಚಿಟ್ಟೆ" ಅಂತ ಬರೆದೆ. ಅರ್ರೆ!!! "ಚಿಟ್ಟೆ" ಒಳಗೇ ೩ ಚಿಟ್ಟೆ ಕಾಣಿಸ್ಬೇಕಾ ನಂಗೆ.!.. ನಂಗೆ ಕಾಣ್ಸಿದ್ದನ್ನ ನಿಮಗೂ ಕಾಣ್ಸುವಂತೆ ಈ ಚಿತ್ರದಲ್ಲಿ ಬಿಡಿಸಿದ್ದೀನಿ... ನೋಡಿರಿ, ನಮ್ಮ ಲಿಪಿಯ ಸೌಂದರ್ಯವನ್ನ ಸವಿಯಿರಿ, ಬೇರೆಯವ್ರ ಅನುಭವಕ್ಕೂ ಈ ರುಚಿಯನ್ನೂ ಹರಡಿ. ಹಾಂ. ಚಿಕ್ಕ ಮಕ್ಳಿಗೆ ಪಾಠ ಹೇಳೋವ್ರು ಇದ್ರೆ, ನಮ್ಮ ಲಿಪಿಯಲ್ಲಿ ಅಡಗಿರೋ ಗಮ್ಮತ್ ನ ಪರಿಚಯಿಸೋದು ಮರಿಬೇಡಿ. ನಾನೂ ಮರಿಯದೇ ಪರಿಚಯಿಸೋ ಪ್ರಯತ್ನ ಮಾಡ್ತಿರ್ತೀನಿ :)
ಬೇಕಿಲ್ಲ ಇದಕೆ ರಂಗಿನ ಬಟ್ಟೆ.
ಅಪ್ಪ ಅಮ್ಮ ಮಗು ಚಿಟ್ಟೆ...
ಇದು ಕನ್ನಡದ ಚಿಟ್ಟೆ. :)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ