ಸೋಮವಾರ, ಅಕ್ಟೋಬರ್ 28, 2013

ವೇದ ಮೂರ್ತಿ


ಬಾಲ್ಯದ ನೆನಪಿನ ಅಚ್ಚೊಂದಿತ್ತು,
ಆಗ ಕ್ರಿಕೆಟ್ ನೋಡುವ ಹುಚ್ಚಿತ್ತು.

ನಮ್ಮ ಮನೇಲಿ ಧಾರಾವಾಹಿ ಹಚ್ಚಿತ್ತು,
ಆದ್ರೆ ಪಕ್ಕದ್ಮನೆವ್ರಿಗೆ ಕ್ರಿಕೆಟ್ ಹುಚ್ಚಿತ್ತು.

ಅವ್ರಿಗೆ ವೇದಮೂರ್ತಿ ಅನ್ನೋ ಬಿರುದಿತ್ತು,
ಗರ್ವದಿ ತುಂಬಿದ ಗತ್ತಿತ್ತು.

ಅವೆಲ್ಲಾ ನಮ್ಗೆಲ್ಲಿ ಗೊತ್ತಿತ್ತು!
ಮ್ಯಾಚ್ ಸಕ್ಕತ್ ಗಮ್ಮತ್ತಿತ್ತು.

ಕಾಲ್ಗಳು ಹೊಸ್ತಿಲಲ್ಲೇ ನಿಂತಿತ್ತು,
ಮೂರ್ತಿಗೆ ಷಡ ನೆತ್ತಿಗೇರಿತ್ತು.

ಹೊಸ್ತಿಲಿಂದ ಸರ್ದು ಅತ್ತಿತ್ತು,
ಕೇಳ್ದೆ ಯಾಕಲ್ ನಿಲ್ಬಾರ್ದಿತ್ತು?

ಉದ್ಧಟತನವು ನನಗೆ ಎಂದಿತ್ತು,
ಅಂದವ್ನಿಗೆ ಹುಚ್ನಾಯಿ ಕಡಿದಿತ್ತು.

ವೇದದ ಅರ್ಥ ಎಂದೋ ಸತ್ತಿತ್ತು,
ಹೃಸ್ವ ಧೀರ್ಗ ಮಾತ್ರ ಉಳಿದಿತ್ತು.

ಬಾಲ್ಯದ ನೆನಪಿನ ಅಚ್ಚೊಂದಿತ್ತು,

ಅರ್ಥ ಪ್ರವೃತ್ತಿಯನ್ನು ನನ್ನಲ್ಲಿ ಬೆಳೆಸಿತ್ತು.